Categories
ನ್ಯೂಸ್ ಭಕ್ತಿ

ನೀವೇನಾದರೂ ಅಪ್ಪಿ ತಪ್ಪಿ ಈ ಕೆಲಸ ಮಾಡಿದ್ದೆ ಆದಲ್ಲಿ ಭಿಕ್ಷೆ ಬೇಡೋ ಪರಿಸ್ಥಿತಿ ಬರಬಹುದು ..!

ಈ ಕೆಲಸವನ್ನು ಜೀವನದಲ್ಲಿ ಎಂದು ಮಾಡಲು ಹೋಗಲೇಬೇಡಿ ಇಲ್ಲವಾದಲ್ಲಿ ಭಿಕ್ಷೆ ಬೇಡುವ ಪರಿಸ್ಥಿತಿ ಬಂದುಬಿಡುತ್ತದೆ, ಹೌದು ಫ್ರೆಂಡ್ಸ್ ಯಾರ ಮೇಲೂ ಅವಲಂಬಿತವಾಗಬಾರದು ಸ್ವಾವಲಂಬಿ ಜೀವನವೇ ಲೇಸು ಎಂಬುದು ನಾವು ಈ ದಿನ ಹೇಳಲು ಹೊರಟಿರುವಂತ ಲೇಖನದಲ್ಲಿ ನಿಮಗೆ ತಿಳಿಯುತ್ತದೆ.ಈ ಒಂದು ವಿಚಾರವನ್ನು ಕುರಿತು ಒಂದು ಕಥೆಯ ಮುಖಾಂತರ ತಿಳಿಸಿಕೊಡುತ್ತೇನೆ ಸ್ವಾವಲಂಬಿ ಜೀವನವೇ ಎಷ್ಟು ಉತ್ತಮ ಹಾಗೂ ಬೇರೆಯವರ ಮೇಲೆ ಅವಲಂಬಿತವಾದರೆ ಹೇಗೆ ನಮ್ಮ ಜೀವಕ್ಕೆ ಕುತ್ತು ಬರುತ್ತದೆ ಅನ್ನೋದನ್ನು, ತಪ್ಪದೇ ಮಾಹಿತಿಯನ್ನು ಪೂರ್ತಿಯಾಗಿ ಓದಿ ಹಾಗೂ ನಿಮ್ಮ ಫ್ರೆಂಡ್ಸ್ ಕೂಡ ಮಾಹಿತಿಯನ್ನು ಮಿಸ್ ಮಾಡದೇ ಶೇರ್ ಮಾಡಿ.

ಒಮ್ಮೆ ರಾಜನು ವಾಯುವಿಹಾರವನ್ನು ಮುಗಿಸಿಕೊಂಡು ತನ್ನ ಅರಮನೆಗೆ ಹಿಂತಿರುಗುವಾಗ ಅರಮನೆಯ ದ್ವಾರವನ್ನು ಕಾಯುತ್ತಿದ್ದ ದ್ವಾರಪಾಲಕನು ಚಳಿಯಲ್ಲಿ ನಡುಗುವುದನ್ನು ಗಮನಿಸುತ್ತಾನೆ ಹಾಗೆ ರಾಜ ದ್ವಾರಪಾಲಕನ ಬಳಿ ಹೋಗಿ ಕೇಳುತ್ತಾನೆ ಯಾಕೆ ಈ ರೀತಿ ಚಳಿಯಲ್ಲಿ ನಡುಗುತ್ತಿದ್ದೀಯ .ಮತ್ತೊಂದು ಬಟ್ಟೆಯನ್ನು ಧರಿಸಿ ಕೊಳ್ಳುವುದಲ್ಲದೆ ಎಂದು ಕೇಳಿದಾಗ ದ್ವಾರಪಾಲಕರು ರಾಜನ ಪ್ರಶ್ನೆಗೆ ಈ ರೀತಿ ಉತ್ತರಿಸುತ್ತಾರೆ ಅದೇನೆಂದರೆ ನನ್ನ ಬಳಿ ಈ ಬಟ್ಟೆ ಮಾತ್ರವಿದೆ ಇದನ್ನೇ ನಾನು ಪ್ರತಿದಿನ ತೊಟ್ಟುಕೊಳ್ಳುತ್ತೇನೆ ಎಂದು ಹೇಳುತ್ತಾನೆ.

ಇದನ್ನು ಕೇಳಿಸಿಕೊಂಡ ರಾಜನು ನಾನು ಅರಮನೆಯೊಳಗೆ ಹೊದಿಕೆಯಾಗಿ ಬಟ್ಟೆಯನ್ನು ಕಳಿಸಿಕೊಡುತ್ತೇನೆ ಎಂದ ರಾಜ ಅಲ್ಲಿಂದ ಹೊರಟು ಬಿಡುತ್ತಾನೆ ನಂತರ ಅನೇಕ ಸಭೆಗಳಲ್ಲಿ ಪಾಲ್ಗೊಂಡು ರಾಜ ತನ್ನ ಆಸ್ಥಾನಕ್ಕೆ ತೆರಳುತ್ತಾನೆ ಅಷ್ಟರಲ್ಲಿ ಸಮಯವಾಗಿತ್ತು ರಾಜ ವಿಶ್ರಾಂತಿ ಪಡೆಯಲೆಂದು ಹೋಗುತ್ತಾನೆ .ಮಾರನೆ ದಿವಸ ಎದ್ದ ಬಳಿಕ ಸೈನಿಕರು ರಾಜನ ಬಳಿ ಒಂದು ಕಹಿ ಸುದ್ದಿಯನ್ನು ತರುತ್ತಾರೆ ಅದೇನೆಂದರೆ ದ್ವಾರಪಾಲಕರು ಮೃತಪಟ್ಟಿರುವ ವಿಚಾರವನ್ನು ಇದನ್ನು ಕೇಳಿ ರಾಜನು ಆ ದ್ವಾರಪಾಲಕ ಮೃತಪಟ್ಟ ಜಾಗಕ್ಕೆ ತೆರಳುತ್ತಾನೆ.

ರಾಜನು ದ್ವಾರಪಾಲಕನನ್ನು ಗಮನಿಸಿದಾಗ ದ್ವಾರಪಾಲಕ ತನ್ನ ಬೆರಳಿನಿಂದ ಮರಳಿನ ಮೇಲೆ ಕೆಲವೊಂದು ಪದಗಳನ್ನು ಹೆಚ್ಚಿರುತ್ತಾರೆ ಅದನ್ನು ಗಮನಿಸಿದ ರಾಜ ತಾನು ಹಿಂದಿನ ದಿನ ದ್ವಾರ ಪಾಲಕರಿಗೆ ಕೊಟ್ಟ ಮಾತುಗಳನ್ನು ನೆನೆಸಿಕೊಳ್ಳುತ್ತಾನೆ. ದ್ವಾರಪಾಲಕ ನೆಲದ ಮೇಲೆ ಈ ರೀತಿ ಬರೆದಿದ್ದ ,ಅದೇನೆಂದರೆ ರಾಜಾ ನಾನು ಇವತ್ತಿನ ದಿನದವರೆಗು ಈ ಒಂದೇ ಬಟ್ಟೆಯಲ್ಲಿ ದಿನಗಳನ್ನು ಕಳೆಯುತ್ತಿದ್ದೆ ಎಷ್ಟೇ ಚಳಿಯಿದ್ದರೂ ನನಗೆ ಯಾವತ್ತಿಗೂ ಈ ರೀತಿ ಅನಿಸಿರಲಿಲ್ಲ ಆದರೆ ನೀವು ಕೊಟ್ಟ ಮಾತಿನಿಂದ ಒಂದು ನಿಮಿಷದ ಆಸೆಯಿಂದಾಗಿ ಇದೀಗ ನಾನು ಚಳಿಯಿಂದ ಮೃತ ಪಡುತ್ತಿದ್ದೇನೆ ಎಂದು ದ್ವಾರಪಾಲಕ ರಾಜನಿಗೆ ಸಂದೇಶವನ್ನು ಬರೆದಿಟ್ಟಿದ್ದ.

ಇದರಿಂದ ನಮಗೆ ತಿಳಿಯುವುದೇನೆಂದರೆ ಫ್ರೆಂಡ್ಸ್ ಯಾವತ್ತಿಗೂ ನಾವು ಬೇರೆಯವರ ಮೇಲೆ ಅವಲಂಬಿತವಾಗಬಾರದು. ನಾವು ದೈಹಿಕವಾಗಿ ಮಾನಸಿಕವಾಗಿ ಅಥವಾ ಶಾರೀರಿಕವಾಗಿ ಬೇರೆಯವರ ಮೇಲೆ ಅವಲಂಬಿತವಾದರೆ ನಾವು ನಮ್ಮಲ್ಲಿರುವ ಆತ್ಮ ಸ್ಥಿರತೆಯನ್ನು ಕಳೆದುಕೊಳ್ಳುತ್ತಾ ಹೋಗುತ್ತೇವೆ ಹಾಗೂ ಬೇರೆಯವರ ಮೇಲೆ ಅವಲಂಬಿತವಾಗಿರುವುದರಿಂದ ನಮ್ಮಲ್ಲಿರುವ ಶಕ್ತಿ ನಮಗೆ ತಿಳಿಯುವುದಿಲ್ಲ ಪ್ರತಿಯೊಂದಕ್ಕೂ ನಾವು ಬೇರೆಯವರ ಮೇಲೆ ಅವಲಂಬಿತವಾಗಿಬಿಡುತ್ತೇವೆ.

ಬಿಲ್ ಗೇಟ್ಸ್ ಅಂಬಾನಿ ಪದ್ಮ ವಿಭೂಷಣ ಪ್ರಶಸ್ತಿ ವಿಜೇತ ಡಾ ರಾಜ್ ಕುಮಾರ್ ಇನ್ನೂ ಹಲವಾರು ಸಾಧಕರು ಯಾವತ್ತಿಗೂ ತಮ್ಮ ಕೆಲಸಗಳನ್ನು ಮಾಡಿಕೊಳ್ಳುವುದರಲ್ಲಿ ಬೇರೆಯವರ ಮೇಲೆ ಅವಲಂಬಿತವಾಗಿತ್ತು ಶಕ್ತಿಯನ್ನು ಅರಿತು ತಾವೇ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುತ್ತಿದ್ದರೂ ಹಾಗೆ ಕಷ್ಟವನ್ನು ಎದುರಿಸುತ್ತಿದ್ದು .

ಆದ್ದರಿಂದ ಹೇಗೆ ನಾವು ದೇಹವನ್ನು ದಂಡಿಸಿದಾಗ ಮಾಂಸ ಖಂಡಗಳು ಗಟ್ಟಿಯಾಗುತ್ತಾ ಹಾಗೆ ಮನುಷ್ಯನು ಕಷ್ಟಗಳನ್ನು ಎದುರಿಸುತ್ತಾ ಆತ್ಮಸ್ಥಿರತೆ ಹೆಚ್ಚುತ್ತದೆ ಇದರಿಂದ ಸ್ವಾವಲಂಬಿ ಬದುಕು ಬದುಕ ಬೇಕೆನಿಸುತ್ತದೆ, ಜೀವನದಲ್ಲಿ ಎತ್ತರದ ಮಟ್ಟಕ್ಕೆ ಬೆಳೆಯಬಹುದು ಆದ್ದರಿಂದ ಯಾವತ್ತಿಗೂ ಯಾರ ಮೇಲೆಯೂ ಅವಲಂಬಿತರಾಗಬೇಡಿ ನಿಮ್ಮಲ್ಲಿರುವ ಶಕ್ತಿಯನ್ನು ಗುರುತಿಸಿ ಅದನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಂಡು ಜೀವನದಲ್ಲಿ ವಿಜಯವನ್ನು ಸಾಧಿಸಿ.

Leave a Reply

Your email address will not be published. Required fields are marked *