ನಿಮ್ಮ ಮನೆಯಲ್ಲಿ ಇಂತಹ ದೇವರ ಫೋಟೋಗಳನ್ನು ಇಡುವುದರಿಂದ ಮನೆಗೆ ನೆಮ್ಮದಿ ದಾಂಪತ್ಯದಲ್ಲಿ ಸುಖ ಜೀವನ ಮತ್ತು ಮಕ್ಕಳ ವಿದ್ಯಾಭ್ಯಾಸ ಎಲ್ಲವೂ ಕೂಡ ವೃದ್ಧಿಸುತ್ತದೆ ಹಾಗಾದರೆ ನೀವು ನಿಮ್ಮ ಮನೆಯಲ್ಲಿ ಇಂತಹ ಫೋಟೋಗಳನ್ನು ಇಟ್ಟಿದ್ದೀರಾ ಅನ್ನೋದನ್ನ ಈಗಲೇ ಪರೀಕ್ಷಿಸಿಕೊಳ್ಳಿ.ಮತ್ತು ನಿಮ್ಮ ಮನೆಯಲ್ಲಿ ಇಂತಹ ಫೋಟೊಗಳು ಇಲ್ಲವಾದರೆ ಈಗಲೇ ಅಂತಹ ದೇವರ ಫೊಟೋಗಳನ್ನು ಮನೆಯಲ್ಲಿ ತಂದು ಇಡುವುದರಿಂದ ಸಾಕಷ್ಟು ಪ್ರಯೋಜನಗಳನ್ನು ನೀವು ಪಡೆದುಕೊಳ್ಳಬಹುದಾಗಿದೆ .
ಎಲ್ಲರೂ ಕೂಡ ತಮ್ಮ ಮನೆಯಲ್ಲಿ ಒಂದು ದೇವರಿಗೆ ಅಂತಾನೇ ದೇವರ ಆರಾಧನೆ ಮಾಡಲೆಂದೇ ದೇವರ ಕೋಣೆಯನ್ನು ಕಟ್ಟಿಸುತ್ತಾರೆ ಹೀಗೆ ದೇವರ ಕೋಣೆಯಲ್ಲಿ ಯಾವುದೋ ಯಾವುದೋ ಫೋಟೋಗಳನ್ನು ಇಡುವುದರಿಂದ ಯಾವ ಫಲಿತಾಂಶವೂ ಸಿಗುವುದಿಲ್ಲ.ಮತ್ತು ಹಿರಿಯರು ಇಂತಹದ್ದೇ ದೇವರ ಫೊಟೋಗಳನ್ನು ಮನೆಯಲ್ಲಿ ಇಡಬೇಕು ದೇವರ ವಿಗ್ರಹಗಳನ್ನು ಮನೆಯಲ್ಲಿ ಇಡಬೇಕು ಅನ್ನೋ ಒಂದು ಪದ್ಧತಿಯನ್ನು ಪಾಲಿಸಿಕೊಂಡು ಬರುತ್ತಿದ್ದರು ಆದರೆ ಮನುಷ್ಯ ಇಂದಿನ ದಿನಗಳಲ್ಲಿ ತನಗೆ ಇಷ್ಟವಾಗುವಂತಹ ಫೋಟೋಗಳನ್ನು ಇಟ್ಟು ಪೂಜಿಸುತ್ತಾನೆ ಆದರೆ ಈ ರೀತಿ ಮಾಡುವುದರಿಂದ ಮನೆಯವರಿಗೆ ಯಾವುದೇ ರೀತಿಯ ಲಾಭವಿಲ್ಲ .
ಮನೆಯಲ್ಲಿ ಇಂತಹದ್ದೇ ದೇವರ ಫೋಟೋಗಳನ್ನು ಇಡಬೇಕು ಅನ್ನೋ ವಿಧಾನವಿದೆ ಮೊದಲನೆಯದಾಗಿ ಮನೆಯಲ್ಲಿ ಇಡಬೇಕಾದ ದೇವರ ಪಟ ಯಾವುದು ಅಂದರೆ ರಾಮ ಸೀತೆಯರು ಇರುವಂತಹ ಫೋಟೊವನ್ನು ಮನೆಯಲ್ಲಿ ಇಟ್ಟು ಪೂಜಿಸಬೇಕು.ರಾಮ ಸೀತೆ ಇರುವಂತಹ ಫೋಟೊವನ್ನು ಮನೆಯಲ್ಲಿ ಇಟ್ಟು ಪೂಜಿಸುವುದರಿಂದ ಮನೆಯಲ್ಲಿ ಗಂಡ ಹೆಂಡತಿ ನೆಮ್ಮದಿಯಿಂದ ಜೀವನವನ್ನು ನಡೆಸುತ್ತಾರೆ ಇದರ ಜೊತೆಗೆ ಮನೆಯಲ್ಲಿ ನೆಮ್ಮದಿ ಕೂಡ ನೆಲೆಸುತ್ತದೆ .
ಮತ್ತೊಂದು ಫೋಟೊ ಅಂದರೆ ಅದು ಅರ್ಧನಾರೀಶ್ವರರು ಇರುವಂತಹ ಫೋಟೋ ಅವರು ಸ್ನೇಹಿತರ ಈ ರೀತಿ ಈಶ್ವರ ಮತ್ತು ಪಾರ್ವತಿ ದೇವಿಯು ಅರ್ಧನಾರೀಶ್ವರ ರೂಪದಲ್ಲಿ ಇರುವಂಥ ದೇವರ ಫೋಟೋವನ್ನು ಮನೆಯಲ್ಲಿ ಇಡಬೇಕು ಅದನ್ನು ಪ್ರತಿದಿನ ಪೂಜಿಸಬೇಕು ಮತ್ತು ಈಶ್ವರನಿಗೆ ಬಿಳಿ ಹೂವನ್ನು ಮತ್ತು ಪಾರ್ವತಿ ದೇವಿಗೆ ಕೆಂಪು ಹೂವ ವನ್ನು ಅರ್ಪಿಸಿ ಬೇಡಿಕೊಳ್ಳುವುದರಿಂದ ಮನೆಯಲ್ಲಿ ಕಷ್ಟಗಳು ನಿವಾರಣೆಯಾಗುತ್ತದೆ .
ಮೂರನೆಯದಾಗಿ ಮನೆಯಲ್ಲಿ ಪಂಚಮುಖಿ ಆಂಜನೇಯನ ಫೋಟೋವನ್ನು ಇಟ್ಟು ಪೂಜಿಸುವುದರಿಂದ ಮನೆಗೆ ಆಗುವಂತಹ ದೃಷ್ಟಿ ನಿವಾರಣೆಯಾಗುತ್ತದೆ ಮತ್ತು ಈ ರೀತಿ ಪಂಚಮುಖಿ ಆಂಜನೇಯನ ಫೋಟೋ ಇಡುವುದರಿಂದ ಮನೆಯಲ್ಲಿ ಯಾವುದೇ ರೀತಿಯ ದುಷ್ಟಶಕ್ತಿಯ ಹಾವಳಿ ಇರುವುದಿಲ್ಲ . ಮನೆಯಲ್ಲಿ ಲಕ್ಷ್ಮಿ ಕಮಲ ದೊಳಗೆ ಕುಳಿತಿರುವಂತಹ ಫೋಟೋವನ್ನು ಇಟ್ಟು ಪೂಜಿಸಬೇಕು ಮತ್ತು ಈ ಒಂದು ಫೋಟೊದಲ್ಲಿ ಲಕ್ಷ್ಮಿಯ ಎಡ ಮತ್ತು ಬಲ ಭಾಗದಲ್ಲಿ ಆನೆಯು ಬಂಗಾರದ ಕಲಶದಿಂದ ನೀರನ್ನು ಹಾಕುತ್ತಿರುವಂತೆ ಒಂದು ಫೋಟೋವನ್ನು ಇಟ್ಟರೆ ಇನ್ನೂ ತುಂಬಾನೇ ಒಳ್ಳೆಯದಾಗುತ್ತದೆ .
ಇಷ್ಟು ಫೊಟೋಗಳನ್ನು ಮನೆಯಲ್ಲಿ ಇರಿಸಿ ಪೂಜೆ ಮಾಡುವುದರಿಂದ ಸಾಕಷ್ಟು ಒಳ್ಳೆಯ ಶಕ್ತಿ ಮನೆಯಲ್ಲಿ ಇರುತ್ತದೆ ಮತ್ತು ಮನೆಗೆ ಕೂಡ ಒಳ್ಳೆಯ ದಿನಗಳು ಶುರುವಾಗುತ್ತದೆ ಮತ್ತು ಒಂದು ತಿಳಿದುಕೊಳ್ಳ ಬೇಕಾದಂತಹ ವಿಷಯವೇನು ಅಂದರೆ ಮನೆಯಲ್ಲಿ ಯಾವುದೇ ದೇವರ ಫೋಟೋ ವಾಗಲಿ ಅದು ಎರಡೆರಡು ಫೋಟೋಗಳನ್ನು ಇಡಲು ಹೋಗಬಾರದು .
ನಾವು ಈ ಮೇಲೆ ತಿಳಿಸಿದಂತಹ ಫೋಟೋಗಳನ್ನಾಗಲಿ ಒಂದು ಫೋಟೊಗಳನ್ನು ಮಾತ್ರ ಇಡುವುದು ಒಳ್ಳೆಯದು ಯಾವುದೇ ಕಾರಣಕ್ಕೂ ಒಂದೇ ದೇವರ ಎರಡು ಫೋಟೊಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು . ಸ್ನೇಹಿತರ ಇಷ್ಟೆಲ್ಲ ವಿಷಯಗಳನ್ನು ನಿಮ್ಮ ತಲೆಯಲ್ಲಿ ಇಟ್ಟುಕೊಂಡು ಇಂತಹ ಫೋಟೋಗಳನ್ನು ಮಾತ್ರ ಮನೆಯಲ್ಲಿ ಇರಿಸುವುದು ತುಂಬಾನೆ ಒಳ್ಳೆಯದು ಶುಭವಾಗಲಿ ಶುಭ ದಿನ ಧನ್ಯವಾದಗಳು .