Categories
ಅರೋಗ್ಯ ಆರೋಗ್ಯ ನ್ಯೂಸ್

ಹೀಗೆ ಮಾಡಿ ಕುಡೀರಿ ಸಾಕು ಹೊಟ್ಟೆ ಪೂರ್ತಿ ಕ್ಲೀನ್ ಆಗುತ್ತೆ, ಗ್ಯಾಸ್, ಮಲಬದ್ಧತೆ ಶಾಶ್ವತವಾಗಿ ಮಾಯ!

ನಮ್ಮ ದೇಹದಲ್ಲಿ ಎಲ್ಲಾ ಅವಯವಗಳು ಕೂಡ ಮುಖ್ಯವಾದದ್ದು. ಅವಯವಗಳು ಸೇರಿಯೇ ನಮ್ಮ ದೇಹರಚನೆ ಆಗಿರುತ್ತದೆ ಈ ದೇಹದಲ್ಲಿ 1ಅವಯವದ ಕಾರ್ಯ ಸರಿಯಾಗಿ ನಿರ್ವಹಿಸದೇ ಇದ್ದಲ್ಲಿ ನಮ್ಮ ಆರೋಗ್ಯ ಕ್ಷೀಣಿಸಿ ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಆದ್ದರಿಂದ ಈ ದೇಹವು ಆರೋಗ್ಯಕರವಾಗಿ ಇರಬೇಕೆಂದರೆ ಎಲ್ಲಾ ಅವಯವಗಳ ಕ್ರಿಯೆಯು ಸರಿಯಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಏನೋ ಅವಯವಗಳ ಕ್ರಿಯೆಯೇ ಯಾವಾಗ ಸರಿಯಾಗಿ ನಡೆಯುವುದಿಲ್ಲ ಅಂದರೆ ದೇಹದಲ್ಲಿ ವಿಷಕಾರಿ ಅಂಶ ವ್ಯರ್ಥ ಪದಾರ್ಥ ಅಥವಾ ಟಾಕ್ಸಿಕ್ ಅಂಶ ಹೆಚ್ಚಾದಾಗ ಈ ಅವಯವಗಳ ಕ್ರಿಯೆ ನಿಧಾನವಾಗುತ್ತಾ ಹೋಗುತ್ತದೆ ಅಥವಾ ಅವಯವಗಳು ತನ್ನ ಕ್ರಿಯೆಯನ್ನು ಸರಿಯಾಗಿ ನಿರ್ವಹಿಸುವುದಿಲ್ಲ ಇದಕ್ಕಾಗಿ ನಾವು ಕೆಲವೊಂದು ಉಪಯುಕ್ತ ವಿಚಾರಗಳನ್ನು ತಿಳಿದು ಅದನ್ನು ಪಾಲಿಸಿಕೊಂಡು ಬರಬೇಕು ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ.

ಯಾವಾಗ ದೇಹದಲ್ಲಿ ವ್ಯರ್ಥ ಪದಾರ್ಥದ ಅಂಶ ಅಥವಾ ಈ ವ್ಯರ್ಥ ಪದಾರ್ಥದ ಪ್ರಮಾಣ ಹೆಚ್ಚುತ್ತದೆ ಆಗ ಅವಯವಗಳು ತಮ್ಮ ಕ್ರಿಯೆಯನ್ನು ನಿಧಾನಗೊಳಿಸುತ್ತ ಹೋಗುತ್ತದೆ. ಅದಕ್ಕಾಗಿ ನಾವು ದೇಹವನ್ನು ಆಗಾಗ ಡಿಟಾಕ್ಸಿಫೈ ಮಾಡುತ್ತಾ ಇರಬೇಕು ಇದಕ್ಕಾಗಿ ನಾವು ಈ ಮಾಹಿತಿಯಲ್ಲಿ ಒಂದು ಡ್ರಿಂಕ್ ಅನ್ನು ತಿಳಿಸಿಕೊಡುತ್ತೇವೆ. ಈ ಡ್ರಿಂಕ್ ಅನ್ನು ನೀವು ತಪ್ಪದೆ ಪ್ರತಿದಿನ ಕುಡಿಯಬಹುದು ಅಥವಾ ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆ ಅಸಿಡಿಟಿ ಆದಾಗ ಕೂಡ ಈ ಡ್ರಿಂಕ್ ಕುಡಿಯಬಹುದು ಇದರಿಂದ ನಿಮ್ಮ ದೇಹಕ್ಕೆ ಡಿಟಾಕ್ಸ್ ಆಗುತ್ತದೆ, ಅಸಿಡಿಟಿ ಗ್ಯಾಸ್ಟ್ರಿಕ್ ಅಂತಹ ಸಮಸ್ಯೆ ಕೂಡ ನಿವಾರಣೆ ಆಗುತ್ತದೆ.

ಮೊದಲಿಗೆ ಈ ಡ್ರಿಂಕ್ ಮಾಡುವ ವಿಧಾನವನ್ನು ತಿಳಿಯೋಣ ನಂತರ ಈ ಡ್ರಿಂಕ್ ನ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಮೊದಲಿಗೆ ಡ್ರಿಂಕ್ ಮಾಡೋದಕ್ಕೆ ಒಂದೂವರೆ ಲೋಟ ನೀರನ್ನು ಕಾಯಿಸಲು ಇಡಬೇಕು ಈ ನೀರು ಕುದಿಯುವಾಗ ಇದಕ್ಕೆ ಒಂದು ಚಮಚ ಜೀರಿಗೆ ಅನ್ನು ಹಾಕಿ ನೀರನ್ನು ಕುದಿಸಬೇಕು ಒಂದೂವರೆ ಲೋಟ ನೀರು 1ಲೋಟದ ಪ್ರಮಾಣಕ್ಕೆ ಬರಬೇಕೋ ಅಷ್ಟು ನೀರನ್ನು ಕುದಿಸಿ. ನೀರು ಸ್ವಲ್ಪ ತಣ್ಣಗಾದ ಮೇಲೆ, ಇದಕ್ಕೆ 1ಚಮಚ ನಿಂಬೆ ಹಣ್ಣಿನ ರಸ ಮತ್ತು ಸೈಂಧವ ಲವಣವನ್ನು ಮಿಶ್ರ ಮಾಡಬೇಕು ಅಥವಾ ನಿಮಗೆ ಸಿಹಿ ಬೇಕೆಂದರೆ ಸೈಂಧವ ಲವಣದ ಬದಲು ಜೇನುತುಪ್ಪವನ್ನು ಮಿಶ್ರಣ ಮಾಡಬೇಕು.

ನೆನಪಿನಲ್ಲಿಡಿ ನೀರು ತುಂಬಾ ಬಿಸಿ ಇದ್ದಾಗಲೇ ಇದಕ್ಕೆ ನಿಂಬೆ ಹಣ್ಣಿನ ರಸ ಆಗಲಿ ಅಥವಾ ಜೇನುತುಪ್ಪವನ್ನು ಆಗಲೇ ಮಿಶ್ರಮಾಡಬಾರದು ನೀರು ಬಿಸಿಯಾಗಿದ್ದಾಗ ಜೇನುತುಪ್ಪವನ್ನು ಮಿಶ್ರಣ ಮಾಡಿದರೆ ಆ ಜೇನುತುಪ್ಪದ ಗುಣ ಬದಲಾಗಿ ವಿಷಕಾರಿ ಪದಾರ್ಥವಾಗ ಬಹುದು. ಆದ್ದರಿಂದ ನೀರು ಸ್ವಲ್ಪ ತಣ್ಣಗಾದ ಮೇಲೆ ಇದಕ್ಕೆ ನಿಂಬೆ ಹಣ್ಣಿನ ರಸ ಮತ್ತು ಜೇನು ತುಪ್ಪವನ್ನು ಮಿಶ್ರ ಮಾಡಿ ನಂತರ ಇದನ್ನು ಸೇವಿಸಿ. ಅಸಿಡಿಟಿ ಆದಾಗ ಊಟಕ್ಕೂ ಮೊದಲು ಸೇವಿಸಿ ಅಥವಾ ಬಾಡಿಯನ್ನು ಡಿಟಾಕ್ಸಿಫೈ ಮಾಡುವುದಕ್ಕೆ ಬೆಳಿಗ್ಗೆ ಖಾಲಿ ಹೊಟ್ಟೆಗೆ ಈ ಡ್ರಿಂಕ್ ಅನ್ನು ಸೇವಿಸಿ.

ಈ ರೀತಿ ಈ ಡ್ರಿಂಕ್ ದೇಹವನ್ನು ಡಿಟಾಕ್ಸಿಫೈ ಮಾಡುತ್ತದೆ. ಅಸಿಡಿಟಿ ಸಮಸ್ಯೆಯನ್ನು ನಿವಾರಿಸುತ್ತದೆ ಇನ್ನೂ ಹಸಿವನ್ನು ಕೂಡ ಹೆಚ್ಚು ಮಾಡುತ್ತದೆ ದೇಹದಲ್ಲಿ ಮೆಟಬಾಲಿಸಮ್ ರೇಟ್ ಹೆಚ್ಚು ಮಾಡಿ ಹೆಚ್ಚು ಕ್ಯಾಲರಿ ಕರಗುವ ಹಾಗೆ ಮಾಡುತ್ತದೆ ಹೃದಯದ ಆರೋಗ್ಯವನ್ನು ಹೆಚ್ಚು ಮಾಡುತ್ತದೆ ಎಲ್ಲಾ ಅವಯವಗಳ ಆರೋಗ್ಯವನ್ನು ರಕ್ಷಿಸುತ್ತದೆ. ಡ್ರಿಂಕ್ ಸೇರಿಸಿ ಆರೋಗ್ಯವನ್ನು ಹೆಚ್ಚು ಮಾಡಿಕೊಳ್ಳಿ ಧನ್ಯವಾದ.

Leave a Reply

Your email address will not be published. Required fields are marked *