Categories
ನ್ಯೂಸ್ ಸಿನಿಮಾ

‘ಸೋಜುಗಾದ ಸೂಜುಮಲ್ಲಿಗೆ..’ ಹಾಡಿದ ಅನನ್ಯಾ ಭಟ್‌ ಈಗ ಹೀರೋಯಿನ್‌! ಅದು ಯಾವ ಸಿನಿಮಾ ಗೊತ್ತ ..!

ಸೋಜುಗಾದ ಸೂಜಿಮಲ್ಲಿಗೆ ಈ ಹಾಡು ಕಳೆದ ವರುಷ ಎಷ್ಟೋ ಹಿಟ್ಟಾಗಿತ್ತು ಬಹಳಷ್ಟು ಜನರ ಬಾಯಲ್ಲಿ ಈ ಹಾಡು ಕೇಳಿಬರುತ್ತಿತ್ತು ಅಷ್ಟು ಮಾತ್ರವಲ್ಲದೆ ಸಾಕಷ್ಟು ಜನರು ಈ ಹಾಡನ್ನು ಕೇಳಿ ಈ ಹಾಡಿನ ಒಳ ಅರ್ಥವನ್ನು ತಿಳಿಯಲು ಪ್ರಯತ್ನವನ್ನು ಕೂಡ ಪಟ್ಟಿದ್ದರು ಹಾಗೆ ಈ ಸೋಜುಗದ ಸೂಜು ಮಲ್ಲಿಗೆ ಹಾಡು ಹಿಟ್ ಆಗುವುದಕ್ಕೆ ಈ ಹಾಡಿನ ಒಳಾರ್ಥ ಮಾತ್ರವಲ್ಲ ಈ ಹಾಡನ್ನು ಹಾಡಿದ ಕಲಾವಿದೆ ಕೂಡ ಅಷ್ಟೇ ಕಾರಣರಾಗಿದ್ದಾರೆ ಹೌದು ಆರ್ ಅವರೇ ಅನನ್ಯ ಭಟ್ ಸೋಜಿಗದ ಸೂಜಿಮಲ್ಲಿಗೆ ಹಾಡನು ಹಾಡುವ ಮುಖಾಂತರ ಸಖತ್ ಖ್ಯಾತಿ ಪಡೆದ ಅನನ್ಯ ಭಟ್ ರವರು ಇದೀಗ ಸಿನಿಮಾದಲ್ಲಿ ನಟಿಯಾಗಿ ಅಭಿನಯಿಸುತ್ತಿದ್ದಾರೆ.

ಸೋಜಿಗದ ಸೂಜಿಮಲ್ಲಿಗೆ ಅನನ್ಯ ಭಟ್ ಇದೀಗ “ಸೋಷಿಯಲ್ ವರ್ಕರ್ ರಾಧಾ”. ಹೌದು 1ಉತ್ತಮ ಕಥೆಯೊಂದಿಗೆ ಸಿನಿಮಾ ಮಾಡುತ್ತಿರುವಂತಹ ಅನನ್ಯ ಭಟ್ ರವರು ಈ ಚಿತ್ರದ ಹೆಸರು ಸೇನಾಪುರ ಎಂದು ಈ ಕಥೆ ನೈಜ ಘಟನೆಯನ್ನು ಆಧಾರಿತವಾದ ಕಥೆಯಾಗಿದೆ ಈ ಸಿನಿಮಾವನ್ನು ಗುರು ಸಾವನ್ ರವರು ನಿರ್ದೇಶನ ಮಾಡುತ್ತಿದ್ದು ಇದೂ ಗುರು ಇವರ ಮೊದಲನೆ ಸಿನಿಮಾ ಆಗಿದೆ. ಕುಂದಾಪುರ ಮೂಲದ ಗುರು ಸಾವನ್ ರವರು ನೂರಾರು ವರುಷಗಳ ಹಿಂದಿನ ನೈಜ ಘಟನೆಯನ್ನು ಆಧರಿಸಿ ಕಥೆಯನ್ನು ಬರೆದು ಇದೀಗ ಸಿನಿಮಾ ಆಗಿ ಜನರ ಮುಂದೆ ತರುತ್ತಿದ್ದಾರೆ ಈ ಸಿನಿಮಾ ದಿಂದ ಜನರು ತಿಳಿದುಕೊಳ್ಳುವ ವಿಚಾರಗಳು ಹಲವಾರು ಇದೆ ಈ ಸಿನಿಮಾದಲ್ಲಿ ಸೋಷಿಯಲ್ ವರ್ಕರ್ ಆಗಿ ಅನನ್ಯ ಭಟ್ ಕಾಣಿಸಿಕೊಳ್ಳಲಿದ್ದಾರೆ.

ಈ ಸಿನಿಮಾವನ್ನು ನೋಡಿ ನಮ್ಮ ಪೀಳಿಗೆಯವರು ಸೋಷಿಯಲ್ ವರ್ಕರ್ ರಾಧರಂತೆ ಸಮಾಜವನ್ನು ಬದಲಾಯಿಸುವ ನಿಟ್ಟನ್ನು ಹೊಂದಲಿ ಎಂಬುದಕ್ಕಾಗಿ ಈ ಸಿನಿಮಾವನ್ನು ಮಾಡುತ್ತಿದ್ದೇನೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಇನ್ನೂ ಅನನ್ಯ ಭಟ್ ರವರು ನಾನು ರಂಗ ಭೂಮಿಯ ಕಲಾವಿದೆಯಾದ ಕಾರಣ ನನಗೆ ಗ್ಲಾಮರಸ್ ಗಿಂತ ಸಿನಿಮಾದ ಪಾತ್ರ ಮತ್ತು ಕಥೆ ಪ್ರಾಮುಖ್ಯತೆಯನ್ನು ಹೊಂದಿರಬೇಕು. ಆದ ಕಾರಣದಿಂದಲೇ ನನಗೆ ಈ ಸಿನಿಮಾ ಇಷ್ಟವಾಯಿತು. ಉಳ್ಳವರು ಮತ್ತು ಶೋಷಿತರ ನಡುವಿನ ಹೋರಾಟವನ್ನು ಎತ್ತಿಹಿಡಿದಿದೆ ಈ ಸಿನಿಮಾ ಕಥೆ.

ಆದ್ದರಿಂದ ಇಂಟರೆಸ್ಟಿಂಗ್ ಕಥೆಯಾಗಿರುವ ಈ ಒಂದು ಸಿನಿಮಾ ಮೊದಲಿಗೆ ವೆಬ್ ಸೀರಿಸ್ ನಲ್ಲಿ ಚಿತ್ರೀಕರಿಸಬೇಕು ಎಂದು ನಿರ್ಧರಿಸಲಾಗಿತ್ತು. ಆದರೆ ಈ ಸಿನಿಮಾ ಕಥೆಗೆ ಕಮರ್ಷಿಯಲ್ ಟಚ್ ನೀಡಿ ನೈಜವಾಗಿ ಇದನ್ನು ತೆರೆಮೇಲೆ ತರಲಿದೆ ಸಿನಿಮಾ ತಂಡ. ಸಮಾಜಕ್ಕೆ ಒಳ್ಳೆಯ ಮೆಸೇಜ್ ಕೊಡುವ ಈ ಸಿನಿಮಾ ನೂರಾರು ವರ್ಷಗಳ ಹಿಂದಿನ ಕಥೆಯ ಆಧಾರವಾಗಿದ್ದ ಮೊದಲು ಕುಂದಾಪುರದ ಆಚೆ ಈಚೆ ಯಲ್ಲಿ ಮ್ಯಾಂಗನೀಸ್ ಅದಿರನ್ನು ಟ್ರಾನ್ಸ್ಪೋರ್ಟ್ ಮಾಡಲಾಗುತ್ತಿತ್ತು. ಇನ್ನು ಆ ಸಮಯದಲ್ಲಿ ನಡೆದ ಘಟನೆಗಳು ಇದಾಗಿರುತ್ತದೆ, ಪರಿಸರ ನಾಶ ಮತ್ತು ಬಡವರ ಮೇಲೆ ಮಕ್ಕಳ ಮೇಲೆ ಆದ ಶೋಷಣೆ ಇವೆಲ್ಲವನ್ನು ಕೂಡ ತೋರಿಸುವುದೆ ಈ ಸಿನಿಮಾದ ಮುಖ್ಯ ಥೀಮ್ ಆಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಅನನ್ಯಾ ಭಟ್ ರವರು ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈಗಾಗಲೇ ಅನನ್ಯ ರವರು ಉರ್ವಿ ಮತ್ತು ಭೂತಕಾಲ ಎಂಬ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.

Leave a Reply

Your email address will not be published. Required fields are marked *