Categories
ಅರೋಗ್ಯ ಆರೋಗ್ಯ ನ್ಯೂಸ್

ಮೀನಿನ ಮಾಂಸವನ್ನ ತಿನ್ನುವುಂತಹ ಜನರು ಖಂಡಿತವಾಗಿ ಇದನ್ನ ತಿಳಿದುಕೊಳ್ಳಲೇಬೇಕು ..! ತಿಂದ್ರೆ ಏನಾಗುತ್ತೆ ಗೊತ್ತ

ಮೀನಿನ ಮಾಂಸ ತಿನ್ನುವವರು ಈ ಮಾಹಿತಿಯನ್ನು ತಪ್ಪದೇ ತಿಳಿಯಲೇಬೇಕು ಮೀನಿನ ಮಾಂಸವನ್ನು ತಿನ್ನುವುದರಿಂದ ಏನೆಲ್ಲಾ ಲಾಭಗಳು ಆಗುತ್ತದೆ ಎಂಬುದನ್ನು ನಾವು ಈ ಮಾಹಿತಿಯಲ್ಲಿ ತಿಳಿದುಕೊಳ್ಳೋಣ. ತಪ್ಪದೆ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು ಮೀನಿನ ತಲೆ ತಿನ್ನೋದ್ರಿಂದ ಆಗುವ ಲಾಭಗಳ ಕುರಿತು ತಿಳಿದುಕೊಳ್ಳೋಣ. ಇದರ ಜೊತೆಗೆ ಯಾವೆಲ್ಲ ಅನಾರೋಗ್ಯ ಸಮಸ್ಯೆಗಳು ಪರಿಹಾರ ಆಗುತ್ತದೆ ಈ ಮೀನಿನ ಮಾಂಸ ಮತ್ತು ಮೀನಿನ ತಲೆಯನ್ನು ತಿನ್ನುವುದರಿಂದ ಎಂಬುದನ್ನು ತಿಳಿಯೋಣ. ಈ ಭೂಗ್ರಹದಲ್ಲಿ ರುಚಿಕರವಾದ ಮತ್ತು ಆರೋಗ್ಯಕರವಾದ ಮಾಂಸದ ಪದಾರ್ಥ ಅಂದರೆ ಅದು ಮೀನಿನ ಮಾಂಸ ಅಂತ ಹೇಳಿದರೆ ತಪ್ಪಾಗಲಾರದು. ಹೌದು ಅಷ್ಟೊಂದು ಪೋಷಕಾಂಶಗಳನ್ನು ಹೊಂದಿರುವ ಮೀನು ಇದರ ಮಾಂಸ ಮನುಷ್ಯನ ದೇಹಕ್ಕೆ ಸಾಕಷ್ಟು ಆರೋಗ್ಯಕರ ಲಾಭಗಳನ್ನು ನೀಡುತ್ತದೆ.

ಪ್ರೋಟೀನ್ ವಿಟಮಿನ್ ಡಿ ಜೀವಸತ್ವ ಕ್ಯಾಲ್ಸಿಯಂ ಫಾಸ್ಫರಸ್ ಎಂಬ ಮುಖ್ಯ ಪೋಷಕಾಂಶಗಳನ್ನು ಹೊಂದಿರುವ ಈ ಮೀನು ಇದರ ಜೊತೆಗೆ ಐರನ್ ಝಿಂಕ್ ಮೆಗ್ನಿಶಿಯಂ ಪೊಟಾಶಿಯಂ ಇಂತಹ ಪೋಷಕಾಂಶಗಳನ್ನು ಕೂಡ ಹೊಂದಿದೆ. ಈ ಮೀನಿನ ತಲೆಯಲ್ಲಿ ಟ್ರೈಗ್ಲಿಸರೈಡ್ ಒಮೆಗಾ ತ್ರಿ ಅಂಶ ಇವೆಲ್ಲವೂ ಕೂಡ ಇದ್ದು, ವಾರದಲ್ಲಿ ಎರಡರಿಂದ ಮೂರು ಬಾರಿ ಮೀನಿನ ಮಾಂಸವನ್ನು ತಿನ್ನುವುದರಿಂದ ಈ ಎಲ್ಲಾ ಅಂಶಗಳನ್ನು ಪಡೆದುಕೊಂಡು, ನಾವು ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಾ ಇರುವವರು ಅಥವಾ ಹೃದಯದ ಆರೋಗ್ಯವನ್ನು ಹೆಚ್ಚು ಮಾಡಿಕೊಳ್ಳುವುದಕ್ಕಾಗಿ ಕೂಡ ಉಪಯುಕ್ತ ಮೀನಿನ ಮಾಂಸ ಮತ್ತು ಮೀನಿನ ತಲೆ. ರಕ್ತ ಕಣ ದಲ್ಲಿ ಇರುವ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಇದು ಹೃದಯದ ಆರೋಗ್ಯವನ್ನು ಹೆಚ್ಚು ಮಾಡುತ್ತದೆ ಇದರ ಜೊತೆಗೆ ತೂಕವನ್ನು ಕೂಡ ತಿಳಿಸುತ್ತದೆ ಹೀಗಾಗಿ ಈ ಮೀನಿನ ತಲೆ ಆರೋಗ್ಯಕ್ಕೆ ಸಾಕಷ್ಟು ಉಪಯುಕ್ತಕರವಾದ ಆರೋಗ್ಯಕರ ಲಾಭಗಳನ್ನು ಸಹ ನೀಡುತ್ತದೆ. ಈ ಮೀನಿನ ಮೇಲ್ಭಾಗದಲ್ಲಿ ಉತ್ಪತ್ತಿಯಾಗುವಂತಹ ಎಣ್ಣೆಯ ಅಂಶ ಇದೂ ಕೂಡ ಉಪಯುಕ್ತಕಾರಿ ಇದು ಡಿಪ್ರೆಷನ್ ಕಡಿಮೆಮಾಡಲು ಸಹಕಾರಿಯಾಗಿದೆ ಮಾನಸಿಕ ಆರೋಗ್ಯವನ್ನು ವೃದ್ಧಿಸುವ ಸಾಮರ್ಥ್ಯ ಮೀನಿನ ತಲೆಗೆ ಇದ್ದು. ಡಿಪ್ರೆಷನ್ ಆದಾಗ ಮೀನಿನ ಮಾಂಸವನ್ನು ತಿನ್ನುವುದರಿಂದ ಮಾನಸಿಕ ಅಸ್ವಸ್ಥತೆ ನಿವಾರಣೆಯಾಗುತ್ತದೆ.

ಮೀನಿನ ತಲೆಯನ್ನು ತಿನ್ನುವುದರಿಂದ ಇದರಲ್ಲಿ ಇರುವಂತಹ ವಿಟಮಿನ್ ಡಿ ಅಂಶ ಸೂರ್ಯನ ಬಿಸಿಲಿನಿಂದ ಪಡೆದುಕೊಳ್ಳಬಹುದಾದ ವಿಟಮಿನ್ ಡಿ ಜೀವಸತ್ವ ಕೆ ಸಮಾನವಾಗಿರುತ್ತದೆ. ಇದರಿಂದ ಚರ್ಮದ ಆರೋಗ್ಯ ವೃದ್ಧಿಯಾಗುತ್ತದೆ, ತೂಕ ಇಳಿಕೆಯಾಗುತ್ತದೆ ಹಾಗೆ ಏಕಾಗ್ರತೆ ಕೂಡ ಹೆಚ್ಚುತ್ತದೆ. ಆರ್ಥ್ರೈಟಿಸ್ ಕೀಲು ನೋವಿನಂತಹ ಸಮಸ್ಯೆಯಿಂದ ಬಳಲುತ್ತಾ ಇದ್ದರೆ ಹಾವೊಂದು ಸಮಸ್ಯೆ ಕೂಡ ನಿವಾರಣೆ ಆಗುತ್ತದೆ.ಆ್ಯಂಟಿ ಡಿಪ್ರೆಷನ್ ಮೂಡ್ ಸ್ವಿಂಗ್ಸ್ ಇರುವ ಈ ಮೀನಿನ ತಲೆಯನ್ನು ಸೇವನೆ ಮಾಡುವುದರಿಂದ ಮನಸ್ಸು ಉಲ್ಲಾಸಭರಿತವಾಗಿರುತ್ತದೆ.

ಟೈಪ್ ಟು ಡಯಾಬಿಟೀಸ್ ನಂತಹ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ ಹಾಗೆ ಕ್ಯಾನ್ಸರ್ ಕಾರಕ ಕಣಗಳನ್ನು ನಶಿಸುತ್ತದೆ ಲೈಂಗಿಕ ಸಮಸ್ಯೆ ಉಳ್ಳವರು ಕೂಡಾ ಮೀನಿನ ಮಾಂಸವನ್ನು ಮೀನಿನ ತಲೆಯನ್ನು ಸೇವಿಸಬಹುದು. ಮಕ್ಕಳಿಗೂ ಕೂಡ ಮೀನಿನ ತಲೆಯನ್ನು ವಾರಕ್ಕೆ ಒಂದು ಬಾರಿ ನೀಡುವುದರಿಂದ ಮಕ್ಕಳ ಕಾರ್ಯ ಚಟುವಟಿಕೆ ಹೆಚ್ಚುತ್ತದೆ ಮೆದುಳಿನ ಕಾರ್ಯಕ್ಷಮತೆ ಹೆಚ್ಚಾಗಿ ಮಕ್ಕಳ ಬುದ್ಧಿ ಶಕ್ತಿ ಕೂಡ ವೃದ್ಧಿಯಾಗುತ್ತದೆ.

ಆದರೆ ಮೀನಿನ ಮಾಂಸವನ್ನು ಡೀಪ್ ಫ್ರೈ ಮಾಡಿ ಸೇವನೆ ಮಾಡುವುದಕ್ಕಿಂತ ಈ ಮೀನಿನ ಮಾಂಸವನ್ನು ಅಥವಾ ಮೀನಿನ ತಲೆಯನ್ನು ಗ್ರಿಲ್ ಮಾಡಿ ಅಥವಾ ಸಾರಿನ ರೂಪದಲ್ಲಿ ಬೇಯಿಸಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಹಾಗಾಗಿ ಉತ್ತಮ ಆರೋಗ್ಯಕ್ಕಾಗಿ ಮೀನಿನ ಮಾಂಸ ಸೇವನೆ ಮಾಡಿ ಮತ್ತು ರುಚಿಕರವಾದ ಮೀನಿನ ತಲೆಯನ್ನು ಕೂಡ ಸೇವಿಸಿ ಆರೋಗ್ಯವಂತರಾಗಿ ಇರಿ ಧನ್ಯವಾದ.

Leave a Reply

Your email address will not be published. Required fields are marked *