Categories
ಅರೋಗ್ಯ ಆರೋಗ್ಯ ನ್ಯೂಸ್

ಈ ತರದ ಕಾರಣಗಳು ನಿಮಗೆ ಕಾಣಿಸಿಕೊಂಡಲ್ಲಿ ನಿಮ್ಮ ಕಿಡ್ನಿ ತುಂಬಾ ತೊಂದರೆಯಲ್ಲಿ ಇದೆ ಎಂದು ಅರ್ಥ ..!

ನಮ್ಮ ದೇಹದಲ್ಲಿ ವಿಷಕಾರಿ ವ್ಯರ್ಥ ಪದಾರ್ಥಗಳನ್ನು ಆಚೆ ಹಾಕುವಲ್ಲಿ ಸಹಕಾರಿಯಾಗಿ ಇರುವ ಈ ಮೂತ್ರಪಿಂಡಗಳು, ಎಲ್ಲಾ ಅವಯವಗಳಂತೆ ಮುಖ್ಯವಾದ ಪ್ರಮುಖವಾದ ಅವಯವ ಅಂತ ಹೇಳಬಹುದು. ಈ ಮೂತ್ರಪಿಂಡಗಳ ಬಗ್ಗೆ ಹೇಳಬೇಕೆಂದರೆ ಇದರ ಕ್ರಿಯೆಯ ಬಗ್ಗೆ ನಮಗೆ ಈಗಾಗಲೇ ಹೆಚ್ಚಿನ ಮಾಹಿತಿ ತಿಳಿದಿದೆ ಈ ಮೂತ್ರಪಿಂಡಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯವಶ್ಯಕ. ಇಲ್ಲವಾದಲ್ಲಿ ನಾನಾ ತರಹದ ಅನಾರೋಗ್ಯ ಸಮಸ್ಯೆಗಳಿಂದ ಬಳಲಬೇಕಾಗುತ್ತದೆ ಇನ್ನೂ ದೇಹದಲ್ಲಿ ಟಾಕ್ಸಿಕ್ ಅಂಶ ವಿಷಕಾರಿ ಅಂಶ ಹೆಚ್ಚಾಗಿ ಬೇರೆ ಅವಯವಗಳ ಮೇಲೆಯೂ ಕೂಡ ಅಡ್ಡ ಪರಿಣಾಮ ಬೀರಿ ನಮ್ಮಲ್ಲಿ ಪದೇ ಪದೇ ಅನಾರೋಗ್ಯ ಸಮಸ್ಯೆಗಳನ್ನು ಉಂಟುಮಾಡುವ ಹಾಗೆ ದೇಹ ನಡೆದುಕೊಳ್ಳುತ್ತದೆ.

ಆದ್ದರಿಂದ ಕಿಡ್ನಿ ಫೇಲ್ಯೂರ್ ಆದಾಗ ಅಂದರೆ ಮೂತ್ರಪಿಂಡಗಳು ಸರಿಯಾಗಿ ಕೆಲಸ ನಿರ್ವಹಿಸದ ಇದ್ದಾಗ ಅಥವಾ ಮೂತ್ರಪಿಂಡಗಳಿಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾದಾಗ ನಮ್ಮ ದೇಹದ ಕೆಲವೊಂದು ಸೂಚನೆಗಳನ್ನು ನಮಗೆ ನೀಡುತ್ತದೆ ಆ ಕೆಲವೊಂದು ಲಕ್ಷಣಗಳನ್ನು ತಿಳಿದು ಕಿಡ್ನಿಯಲ್ಲಿ ತೊಂದರೆಯಿದೆ ಎಂದು ನಾವು ಅರ್ಥೈಸಿಕೊಂಡು ಮೂತ್ರಪಿಂಡಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಮುಂದಾಗಬೇಕಾಗುತ್ತದೆ ಇಲ್ಲವಾದಲ್ಲಿ ಮುಂದಿನ ದಿವಸಗಳಲ್ಲಿ ಕಿಡ್ನಿ ಫೇಲ್ಯೂರ್ ನಿಂದಾಗಿ ಸಾ-ವು ಕೂಡ ಸಂಭವಿಸಬಹುದು.

ಮೊದಲಿಗೆ ಕಿಡ್ನಿಯಲ್ಲಿ ತೊಂದರೆಯಿದೆ ಅನ್ನುವವರ ದೇಹಪ್ರಕೃತಿ ಹೇಗಿರುತ್ತದೆಯೆಂದರೆ ಅವರು ನಿರಾಯಾಸವಾಗಿ ಇರುತ್ತಾರೆ ಯಾವುದೇ ಕೆಲಸ ಕಾರ್ಯಗಳಲ್ಲಿಯೂ ಹೆಚ್ಚು ಆಸಕ್ತಿ ವಹಿಸು ವುದಕ್ಕೆ ಸಾಧ್ಯವಾಗುತ್ತಾ ಇರುವುದಿಲ್ಲ. ಬಲಹೀನತೆ ನಿರ್ಲಕ್ಷ್ಯ ಬುದ್ಧಿ ಮತ್ತು ನಿಶ್ಶಕ್ತಿ ಇಂತಹ ಸಮಸ್ಯೆಗಳು ಉಂಟಾಗುತ್ತದೆ ಇದರ ಜತೆಗೆ ವಿಟಮಿನ್ ಡಿ ಗ್ರಹಿಸುವಿಕೆ ಕೂಡ ಕಡಿಮೆಯಾಗುತ್ತದೆ. ಮೂತ್ರಪಿಂಡಗಳಲ್ಲಿ ತೊಂದರೆ ಉಂಟಾದಾಗ ಎರಿಥ್ರೋಫೈಟಾನ್ ಎಂಬ ಕಣ, ದೇಹದಲ್ಲಿ ಕಡಿಮೆಯಾಗುತ್ತದೆ ಮತ್ತು ರಕ್ತಹೀನತೆ ಸಮಸ್ಯೆ ಕೂಡ ಉಂಟಾಗಬಹುದು.

ವಿಪರೀತ ಹೊಟ್ಟೆ ನೋವು ಉಂಟಾಗುತ್ತದೆ ಅಷ್ಟು ಮಾತ್ರ ಅಲ್ಲ ಮೂತ್ರದಲ್ಲಿ ಬಣ್ಣ ಬದಲಾವಣೆಯಾದರೆ ಅಥವಾ ಮೂತ್ರ ವಾಸನೆ ಬರುತ್ತಿದ್ದರೆ ಇದರ ಅರ್ಥವೇನು ಅಂದರೆ ಮೂತ್ರಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಉಂಟಾಗಿರಬಹುದು ಎಂದು ನಾವು ಭಾವಿಸಬೇಕಾಗುತ್ತದೆ ಏನು ಮೂತ್ರದ ಬಣ್ಣ ಗೋಧಿ ಬಣ್ಣ ಕಪ್ಪು ಅಥವಾ ಕೆಂಪು ಏನೋ ಮೂತ್ರದಲ್ಲಿ ರಕ್ತ ಹೋಗುತ್ತಿದ್ದರೆ ಈ ಎಲ್ಲಾ ಲಕ್ಷಣಗಳು ಕಿಡ್ನಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಸೂಚನೆ ನೀಡುತ್ತ ಇರುತ್ತದೆ.

ಕಿಡ್ನಿಯಲ್ಲಿ ತೊಂದರೆಯಿದ್ದರೆ ಕಣ್ಣುಗಳ ಊಟ ಕೂಡ ಉಂಟಾಗುತ್ತದೆ ಇನ್ನು ನಿದ್ರಾಹೀನತೆ ಒಣಚರ್ಮದ ಸಮಸ್ಯೆ ಇದೆಲ್ಲವೂ ಕೂಡ ಉಂಟಾಗುತ್ತದೆ. ಕಿಡ್ನಿ ಫೇಲ್ಯೂರ್ ಆದಾಗ ಚರ್ಮದ ಮೇಲೆ ಕಲೆಗಳು ಕೂಡ ಉಂಟಾಗುತ್ತದೆ ಮತ್ತು ಬೆನ್ನು ನೋವು ಬೆನ್ನಿನ ಪ್ರಾಂತ್ಯದಲ್ಲಿ ಚುಚ್ಚುವ ಅನುಭವ ಆಗುವುದು ಈ ಎಲ್ಲ ಸಮಸ್ಯೆಗಳು ಉಂಟಾಗುತ್ತದೆ.

ಕಾಲುಗಳಲ್ಲಿ ನೋವು ಬೆನ್ನಿನ ಕೆಳಭಾಗದಲ್ಲಿ ನೋವು ನಾಲಿಗೆ ರುಚಿ ಕಂಡು ಹಿಡಿಯದೆ ಇರುವುದು ಇಂತಹ ಎಲ್ಲ ಸಮಸ್ಯೆಗಳು ಕೂಡ ಉಂಟಾಗುತ್ತದೆ ಈ ಕೆಲವೊಂದು ಅನಾರೋಗ್ಯ ಸಮಸ್ಯೆ ಗಳಲ್ಲಿ ಯಾವುದಾದರೂ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಕಿಡ್ನಿ ಪರೀಕ್ಷೆ ಮಾಡುವುದು ತುಂಬಾ ಒಳ್ಳೆಯದು. ಇನ್ನು ಕಿಡ್ನಿ ಸರಿಯಾಗಿ ಕೆಲಸ ನಿರ್ವಹಿಸದೆ ಇದ್ದಾಗ ದೇಹದಲ್ಲಿ ವ್ಯರ್ಥ ಅಂಶ ಹಾಗೆ ಉಳಿಯುತ್ತದೆ. ಇದರಿಂದ ದೇಹ ಊತಕ್ಕೆ ಒಳಗಾಗುತ್ತದೆ ಇನ್ನೂ ನೆನಪಿನ ಶಕ್ತಿ ಕೂಡ ಕಡಿಮೆಯಾಗುತ್ತಾ ಬರುತ್ತದೆ. ಹಸಿವಾಗದೆ ಇರುವುದು ವಾಂತಿ ಆಗುತ್ತಾ ಇರುವುದು ಉಸಿರಾಟದಲ್ಲಿ ತೊಂದರೆ ಇದ್ದ ಎಲ್ಲ ಲಕ್ಷಣಗಳು ಕೂಡ ಕಿಡ್ನಿಗೆ ಸಂಬಂಧಪಟ್ಟ ಸಮಸ್ಯೆಗಳು ಉಂಟಾದಾಗ ಆಗುತ್ತದೆ.

Leave a Reply

Your email address will not be published. Required fields are marked *